See also 2initiate  3initiate
1initiate ಇನಿಷಿಏಟ್‍
ಸಕರ್ಮಕ ಕ್ರಿಯಾಪದ
  1. ಆರಂಭಿಸು; ಶುರುಮಾಡು; ಮೊದಲು ಮಾಡು; ಉಪಕ್ರಮಿಸು; ಪ್ರವರ್ತನಗೊಳಿಸು; ತೊಡಗಿಸು; ಹುಟ್ಟುಹಾಕು; ಜನ್ಮಕೊಡು: initiate a plan ಯೋಜನೆಯನ್ನು ಆರಂಭಿಸು.
  2. (ಸಂಘ, ಪದವಿ, ಉದ್ೋಗ, ಮೊದಲಾದವಕ್ಕೆ ವ್ಯಕ್ತಿಯನ್ನು) ವಿಧಿವತ್ತಾಗಿ ಸೇರಿಸು; ಪ್ರವೇಶಗೊಳಿಸು: the club will initiate new members tomorrow ಸಂಘವು ನಾಳೆ ಹೊಸ ಸದಸ್ಯರನ್ನು ವಿಧಿವತ್ತಾಗಿ ಸೇರಿಸಿಕೊಳ್ಳುತ್ತದೆ.
  3. (ರಹಸ್ಯ, ತತ್ತ್ವಶಾಸ್ತ್ರ, ಮೊದಲಾದವಕ್ಕೆ ವ್ಯಕ್ತಿಗೆ) ದೀಕ್ಷೆಕೊಡು; ಉಪದೇಶಕೊಡು.
See also 1initiate  3initiate
2initiate ಇನಿಷಿಅಟ್‍
ಗುಣವಾಚಕ
  1. ಪ್ರವೇಶ ಪಡೆದ.
  2. ದೀಕ್ಷೆ ಪಡೆದ.
See also 1initiate  2initiate
3initiate ಇನಿಷಿಅಟ್‍
ನಾಮವಾಚಕ
  1. ಪ್ರವೇಶ ಪಡೆದವನು.
  2. ದೀಕ್ಷಿತ; ದೀಕ್ಷೆ ಪಡೆದವನು.