inhibition ಇನ್‍ಹಿಬಿಷನ್‍
ನಾಮವಾಚಕ
  1. ತಡೆ; ಅಡ್ಡಿ; ನಿಷೇಧ; ನಿರೋಧ; ಪ್ರತಿಬಂಧ.
  2. (ಚರ್ಚ್‍ ಕಾನೂನು) (ಬಿಷಪ್ಪನ) ನಿಷೇಧಾಜ್ಞೆ; ತಡೆಯಾಜ್ಞೆ; ತಡೆಯಪ್ಪಣೆ; ಪಾದ್ರಿಯು ಲೌಕಿಕ ಸಂಸ್ಕಾರಗಳನ್ನು ಮಾಡದಂತೆ ಬಿಷಪ್‍ ನಿಷೇಧಿಸುವ ಆಜ್ಞೆ.
  3. (ಮನಶ್ಶಾಸ್ತ್ರ) ಅವರೋಧ; ನಿಗ್ರಹ; ನಿರೋಧ; ಪ್ರತಿರೋಧ; ಸಹಜ ಪ್ರೇರಣೆಯ ಯಾ ಅನುಭವದ ಅಭಿವ್ಯಕ್ತಿಯನ್ನು ತಡೆಯುವ ಬುದ್ಧಿಪೂರ್ವಕವಾದ ಯಾ ಅನೈಚ್ಛಿಕ ನಿಗ್ರಹ.
  4. (ಆಡುಮಾತು) ಹಿಂಜರಿಕೆ; ಸಂಕೋಚ; ಒಂದು ಆಲೋಚನೆ, ಕ್ರಿಯೆ, ಮೊದಲಾದವುಗಳಿಗೆ ಭಾವನಾತ್ಮಕವಾದ ಪ್ರತಿರೋಧ ಯಾ ಅಡಚಣೆ: has inhibitions about singing in public ಸಾರ್ವಜನಿಕರೆದುರಿಗೆ ಹಾಡುವಲ್ಲಿ ಸಂಕೋಚ.