inhibit ಇನ್‍ಹಿಬಿಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಚರ್ಚಿನ ನ್ಯಾಯಶಾಸ್ತ್ರದಲ್ಲಿ, ವ್ಯಕ್ತಿ ಮೊದಲಾದವರನ್ನು ನಿರ್ದಿಷ್ಟ ಕೆಲಸ ಮಾಡದಂತೆ) ತಡೆ; ಅಡ್ಡಿಮಾಡು; ನಿಷೇಧಿಸು; ಪ್ರತಿಬಂಧಿಸು; ನಿರೋಧಿಸು: inhibited the bank from advancing money to the Crown ದೊರೆಗೆ ಹಣವನ್ನು ಮುಂಗಡವಾಗಿ ಕೊಡಲು ಬ್ಯಾಂಕನ್ನು ಪ್ರತಿಬಂಧಿಸಿತು.
  2. (ಪಾದ್ರಿಯನ್ನು) ಧಾರ್ಮಿಕ ಸಂಸ್ಕಾರಕಾರ್ಯಗಳನ್ನು ಮಾಡದಂತೆ ನಿಷೇಧಿಸು: let the Archbishop of Canterbury inhibit the bishop ಕ್ಯಾಂಟರ್‍ ಬರಿಯ ಪ್ರಧಾನ ಬಿಷಪ್‍ನು ಬಿಷಪನ್ನು ಧಾರ್ಮಿಕ ಸಂಸ್ಕಾರಗಳನ್ನು ಮಾಡದಂತೆ ನಿಷೇಧಿಸಲಿ.
  3. (ಕಾರ್ಯ ಯಾ ಪ್ರಕ್ರಮವನ್ನು) ತಡೆ; ಅಡ್ಡಿಮಾಡು; ತಡೆಹಿಡಿ; ನಿರೋಧಿಸು; ನಿಗ್ರಹಿಸು: to inhibit natural impluses ಸಹಜ ಪ್ರೇರಣೆಗಳನ್ನು ತಡೆಹಿಡಿಯಲು.
  4. (ರಸಾಯನವಿಜ್ಞಾನ) ದಮಿಸು; ರಾಸಾಯನಿಕ ಕ್ರಿಯೆಯ ವೇಗ ತಗ್ಗಿಸು ಯಾ ಕ್ರಿಯೆಯನ್ನು ತಡೆಗಟ್ಟು.
  5. (ಭೂತಕೃದಂತದಲ್ಲಿ) ನಿಷೇಧವೊಡ್ಡು; ಪ್ರತಿಬಂಧ ಹಾಕು.