inherit ಇನ್‍ಹೆರಿಟ್‍
ಸಕರ್ಮಕ ಕ್ರಿಯಾಪದ
  1. (ಆಸ್ತಿ, ಅಂತಸ್ತು, ಬಿರುದು, ಮೊದಲಾದವುಗಳನ್ನು) ಪರಂಪರೆಯಾಗಿ, ಪಾರಂಪರ್ಯವಾಗಿ, ವಂಶಾನುಕ್ರಮವಾಗಿ, ಉತ್ತರಾಧಿಕಾರದಿಂದ – ಪಡೆ; ದಾಯಕವಾಗಿ ಪಡೆ: the eldest son will inherit the title ಹಿರಿಯ ಮಗ ಬಿರುದನ್ನು ವಂಶಾನುಕ್ರಮವಾಗಿ ಪಡೆಯುತ್ತಾನೆ.
  2. (ಗುಣ, ಶೀಲಗಳನ್ನು) ಪೂರ್ವಜರಿಂದ, ಆನುವಂಶಿಕವಾಗಿ – ಪಡೆ: she inherited her mother’s good looks ಅವಳು ತನ್ನ ಚೆಲುವಾದ ರೂಪವನ್ನು ತನ್ನ ತಾಯಿಯಿಂದ ಪಡೆದಳು.
  3. (ಯಾವುದನ್ನೋ) ಪಾರಂಪರ್ಯವಾಗಿ, ಪೂರ್ವಾಧಿಕಾರಿಯಿಂದ ಉತ್ತರಾಧಿಕಾರವಾಗಿ – ಪಡೆ: the problems which the new administration inherited from its predecessors ಹೊಸ ಆಡಳಿತವು ತನ್ನ ಹಿಂದಿನವರಿಂದ ಉತ್ತರಾಧಿಕಾರವಾಗಿ ಪಡೆದ ಸಮಸ್ಯೆಗಳು.
ಅಕರ್ಮಕ ಕ್ರಿಯಾಪದ

ಉತ್ತರಾಧಿಕಾರಿಯಾಗು.