inherent ಇನ್‍ಹಿಅರಂಟ್‍, ಇನ್‍ಹೆರಂಟ್‍
ಗುಣವಾಚಕ
  1. ಮೂಲಸ್ವರೂಪದ; ಅಂತರ್ಗತ; ಅಂತರ್ನಿಷ್ಠ; ಯಾವುದೇ ವಸ್ತುವಿನಲ್ಲಿ ಸಹಜ ಶಾಶ್ವತ ಗುಣಲಕ್ಷಣವಾಗಿರುವ; (ಮುಖ್ಯವಾಗಿ ಅಗತ್ಯವಾದ ಯಾ ವಿಶಿಷ್ಟವಾದ) ಮೂಲಾಂಶವನ್ನು ಒಳಗೊಂಡ: inherent beauty ಅಂತರ್ನಿಹಿತ ಸೌಂದರ್ಯ.
  2. (ವ್ಯಕ್ತಿ, ಹುದ್ದೆ, ಮೊದಲಾದವಲ್ಲಿ ಹಕ್ಕು ಬಾಧ್ಯತೆಯಾಗಿ) ನೆಲಸಿರುವ; ಅಧಿಷ್ಠಿತವಾಗಿರುವ; ಸೇರಿರುವ: the legislative authority was inherent in the general assembly ಶಾಸನ ರಚನೆಯ ಅಧಿಕಾರ ಸಾಮಾನ್ಯ ಸಭೆಯಲ್ಲಿ ನೆಲಸಿತ್ತು.