inhere ಇನ್‍ಹಿಅರ್‍
ಅಕರ್ಮಕ ಕ್ರಿಯಾಪದ
  1. (ಗುಣ ಮೊದಲಾದವುಗಳ ವಿಷಯದಲ್ಲಿ) ಒಳಗೊಂಡಿರು; ಒಳಗಿರು; ಅಂತರ್ಗತವಾಗಿರು; ನೆಲಸಿರು; ಸೇರಿರು: the advantages that inhere in a democratic system ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳಗೊಂಡಿರುವ ಅನುಕೂಲಗಳು.
  2. (ಹಕ್ಕು ಮೊದಲಾದವುಗಳ ವಿಷಯದಲ್ಲಿ) (ವ್ಯಕ್ತಿ ಮೊದಲಾದವರಲ್ಲಿ) ಇರು; ನೆಲಸಿರು; ನಿವಿಷ್ಟವಾಗಿರು; ನಿಹಿತವಾಗು: the power inhering in the church ಚರ್ಚಿನಲ್ಲಿ ನೆಲಸಿರುವ ಅಧಿಕಾರ.