inhale ಇನ್‍ಹೇಲ್‍
ಸಕರ್ಮಕ ಕ್ರಿಯಾಪದ
  1. (ಗಾಳಿ, ಅನಿಲ, ಮೊದಲಾದವನ್ನು) ಒಳಸೇದಿಕೊ; ಒಳಕ್ಕೆಳೆದುಕೊ; ಉಚ್ಛ್ವಸಿಸು; ಒಳಕ್ಕೆ ಸೇದಿಕೊ (ರೂಪಕವಾಗಿ ಸಹ): he seems to inhale learning ಅವನು ಜ್ಞಾನವನ್ನು ಒಳಗೆಳೆದುಕೊಳ್ಳುವಂತೆ ತೋರುತ್ತದೆ.
  2. (ಮುಖ್ಯವಾಗಿ ಹೊಗೆಸೊಪ್ಪಿನ ಹೊಗೆಯನ್ನು ಶ್ವಾಸಕೋಶಗಳಿಗೆ) ಸೇದು; ಎಳೆದುಕೊ (ರೂಪಕವಾಗಿ ಸಹ).
ಅಕರ್ಮಕ ಕ್ರಿಯಾಪದ
  1. ಉಸಿರೆಳೆದುಕೊ; ಉಚ್ಛ್ವಸಿಸು.
  2. ಎಳೆ; ಸೇದು: do you inhale when you smoke ನೀನು ಚುಟ್ಟಾ ಸೇದುವಾಗ ಒಳಕ್ಕೆ (ಹೊಗೆ) ಎಳೆದುಕೊಳ್ಳುತೀಯಾ?