inhabit ಇನ್‍ಹ್ಯಾಬಿಟ್‍
ಸಕರ್ಮಕ ಕ್ರಿಯಾಪದ

(ಮನುಷ್ಯರು ಯಾ ಪ್ರಾಣಿಗಳು ಪ್ರದೇಶ, ಊರು, ಮನೆ, ಮೊದಲಾದವಲ್ಲಿ) ಇರು; ವಾಸಿಸು; ನೆಲಸಿರು; ಬೀಡುಬಿಡು; ಒಕ್ಕಲಿರು (ರೂಪಕವಾಗಿ ಸಹ): small animals inhabited the woods ಸಣ್ಣ ಪ್ರಾಣಿಗಳು ಕಾಡಿನಲ್ಲಿ ವಾಸವಾಗಿದ್ದವು. strange notions inhabit his mind ವಿಚಿತ್ರ ಕಲ್ಪನೆಗಳು ಅವನ ಮನಸ್ಸಿನಲ್ಲಿ ನೆಲಸಿವೆ.