ingenious ಇನ್‍ಜೀನಿಅಸ್‍
ಗುಣವಾಚಕ
  1. (ಕಲ್ಪಿಸುವುದು, ರಚಿಸುವುದು, ವ್ಯವಸ್ಥೆ ಮಾಡುವುದು, ಮೊದಲಾದವುಗಳಲ್ಲಿ) ಜಾಣನಾದ; ಚತುರ; ಕುಶಲ; ಉಪಾಯ ಕೌಶಲವುಳ್ಳ.
  2. ಜಾಣ್ಮೆಯ; ಜಾಣತನದ; (ಅತಿ)ಬುದ್ಧಿವಂತಿಕೆಯ; ಚಾತುರ್ಯದಿಂದ ಕಲ್ಪಿಸಿದ; ಚಮತ್ಕಾರದಿಂದ – ನಿರ್ಮಿಸಿದ, ಸೃಷ್ಟಿಸಿದ, ರೂಪಿಸಿದ: ingenious machine ಚಾತುರ್ಯದಿಂದ ನಿರ್ಮಿಸಿದ ಯಂತ್ರ. ingenious explanation, theory ಜಾಣ್ಮೆಯ ವಿವರಣೆ, ಸಿದ್ಧಾಂತ.