infuse ಇನ್‍ಹ್ಯೂಸ್‍
ಸಕರ್ಮಕ ಕ್ರಿಯಾಪದ
  1. (ಪದಾರ್ಥವನ್ನು) ಒಳಕ್ಕೆ – ಸುರಿ, ಹೊಯ್ಯು.
  2. (ರೂಪಕವಾಗಿ) (ಸೊಬಗು, ಉತ್ಸಾಹ, ಜೀವ, ಮೊದಲಾದವನ್ನು) ಎರೆ; ತುಂಬು.
  3. (ಗುಣ ಮೊದಲಾದವುಗಳಿಂದ) ವ್ಯಾಪನೆಗೊಳಿಸು; ತುಂಬು.
  4. (ಮೂಲಿಕೆ, ಟೀ, ಎಲೆ, ಮೊದಲಾದವನ್ನು ಅದರ ಕಷಾಯ ತೆಗೆಯಲು) ದ್ರವದಲ್ಲಿ – ನೆನೆಸು, ಊರಿಸು; ನೆನೆಯ ಹಾಕು.
ಅಕರ್ಮಕ ಕ್ರಿಯಾಪದ

(ದ್ರವದಲ್ಲಿ) ನೆನೆ; ಊರು: let it infuse for five minutes ಅದು ಐದು ನಿಮಿಷ ಊರಲಿ, ನೆನೆಯಲಿ; ಅದನ್ನು ಐದು ನಿಮಿಷ ಊರಗೊಡು.