inform ಇನ್‍ಹಾರ್ಮ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗೆ ವಿಷಯವನ್ನು ಯಾ ವಿಷಯದ ಬಗ್ಗೆ) ಹೇಳು; ತಿಳಿಸು; ಅರುಹು; ಶ್ರುತಪಡಿಸು; ಸುದ್ದಿ ನೀಡು; ವರ್ತಮಾನ ಕೊಡು.
  2. (ಸಾಹಿತ್ಯಕ) (ವ್ಯಕ್ತಿ, ಹೃದಯ, ವಸ್ತು, ಮೊದಲಾದವುಗಳನ್ನು ಸಂವೇದನೆ, ತತ್ತ್ವ, ಗುಣ, ಮೊದಲಾದವುಗಳಿಂದ) ತುಂಬು; ಆವೇಶಗೊಳಿಸು.
  3. (ಗುಣವನ್ನು) ನೀಡು; ತುಂಬು; ವ್ಯಾಪಿಸುವಂತೆ ಮಾಡು; ವ್ಯಾಪನೆಗೊಳಿಸು: a love of nature informed his activities ಪ್ರಕೃತಿ ಪ್ರೇಮ ಅವನ ಚಟುವಟಿಕೆಗಳನ್ನು ತುಂಬಿತ್ತು, ವ್ಯಾಪಿಸಿತ್ತು.
  4. ಪ್ರೇರಿಸು; ಉದ್ಬೋಧಿಸು.
  5. (ಗತಪ್ರಯೋಗ) ಶಿಕ್ಷಣ ನೀಡು; ಬೋಧಿಸು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ನ್ಯಾಯಾಧಿಪತಿ ಮೊದಲಾದವರಲ್ಲಿ ಒಬ್ಬನ ಮೇಲೆ) ದೂರು, ಆಪಾದನೆ, ಆರೋಪ – ಹೊರಿಸು.

ಪದಗುಚ್ಛ
  1. inform against ಒಬ್ಬನ ವಿರುದ್ಧ (ಪೊಲೀಸರಿಗೆ) ಸಾಕ್ಷ್ಯ, ಸುದ್ದಿ ಯಾ ದೂರು ನೀಡು.
  2. inform on = ಪದಗುಚ್ಛ \((1)\).