inflorescence ಇನ್‍ಹ್ಲರೆಸನ್ಸ್‍
ನಾಮವಾಚಕ
  1. ಪುಷ್ಪ ವಿನ್ಯಾಸ; ಹೂಜೋಡಣೆ; ಗಿಡದ ಅಕ್ಷದ ಸುತ್ತ ಮತ್ತು ಪರಸ್ಪರವಾಗಿ ಹೂಗಳ ಜೋಡಣೆ ಯಾ ಹಾಗೆ ಅವು ಜೋಡಣೆಗೊಂಡಿರುವ ರೀತಿ.
  2. ಗೊಂಚಲು ಹೂವು; ಗೊಂಡೆಹೂವು; ಪುಷ್ಪಗುಚ್ಛ; ಹೂಗೊಂಚಲು.
  3. ಹೂವು ಬಿಡುವುದು; ಪುಷ್ಪಿತವಾಗುವುದು; ಕುಸುಮಿತವಾಗುವುದು (ರೂಪಕವಾಗಿ ಸಹ): those who are coming into their time of inflorescence ತಮ್ಮ ಪುಷ್ಪಿತ ಕಾಲಕ್ಕೆ, ಪುಷ್ಪೋದಯಕ್ಕೆ – ಬರುತ್ತಿರುವವರು.