inflect ಇನ್‍ಹ್ಲೆಕ್ಟ್‍
ಸಕರ್ಮಕ ಕ್ರಿಯಾಪದ
  1. ಒಳಗಡೆಗೆ – ಬಾಗಿಸು, ಕೊಂಕಿಸು.
  2. (ವ್ಯಾಕರಣ) (ವ್ಯಾಕರಣದ ಸಂಬಂಧವನ್ನು ತೋರಿಸಲು ವಿಭಕ್ತಿ ಇಲ್ಲವೆ ಆಖ್ಯಾತ ಪ್ರತ್ಯಯಗಳನ್ನು ಹಚ್ಚಿ) ರೂಪನಿಷ್ಪತ್ತಿಮಾಡು; ವಿಭಕ್ತಿ ಇಲ್ಲವೆ ಆಖ್ಯಾತ ರೂಪಗಳನ್ನು ನಡೆಸು.
  3. (ಸಂಗೀತ) (ಸ್ವರವನ್ನು) ತಗ್ಗಿಸು ಯಾ ಏರಿಸು; ಸ್ಥಾಯಿ ಬದಲಾಯಿಸು.