inflation ಇನ್‍ಹ್ಲೇಷನ್‍
ನಾಮವಾಚಕ
  1. (ಗಾಳಿ ಯಾ ಅನಿಲ ತುಂಬಿ) ಉಬ್ಬಿಸುವುದು; ಉಬ್ಬಿಸಿಕೆ; ಹಿಗ್ಗಿಸುವುದು; ಊದಿಸುವುದು.
  2. (ಗಾಳಿ ಯಾ ಅನಿಲ ತುಂಬಿ) ಉಬ್ಬಿದ ಸ್ಥಿತಿ.
  3. (ವ್ಯಕ್ತಿಯನ್ನು, ಹೆಮ್ಮೆ ಮೊದಲಾದವುಗಳಿಂದ) ಉಬ್ಬಿಸುವುದು; ಬೀಗಿಸುವುದು.
  4. (ಅರ್ಥಶಾಸ್ತ್ರ) ಹಣದುಬ್ಬರ:
    1. ಪದಾರ್ಥಗಳ ಬೆಲೆ ಏರಿ, ಹಣದ ಕೊಳ್ಳುವ ಮೌಲ್ಯ ಕುಸಿಯುವುದು.
    2. ಹಣದ ಅತಿ ಪ್ರಸರಣ; ಹಣದ ಕೊಳ್ಳುವ ಮೌಲ್ಯ ಕುಸಿಯುವಂತೆ ಲಭ್ಯವಾಗಿರುವ ಹಣದ ಪ್ರಮಾಣ, ಮೊತ್ತ ಹೆಚ್ಚುವುದು.