inflammation ಇನ್‍ಹ್ಲಮೇಷನ್‍
ನಾಮವಾಚಕ
  1. ಉರಿ, ಜ್ವಾಲೆ – ಎಬ್ಬಿಸುವುದು ಯಾ ಏಳುವುದು.
  2. (ರೂಪಕವಾಗಿ) ಕೆರಳಿಸುವುದು; ರೇಗಿಸುವುದು; ಉದ್ರೇಕಿಸುವುದು.
  3. ಕೆರಳುವುದು; ರೇಗುವುದು; ಉದ್ರೇಕಗೊಳ್ಳುವುದು.
  4. (ರೋಗಶಾಸ್ತ್ರ) ಉರಿಯೂತ; ಮೈಯ ಯಾವುದೇ ಭಾಗದಲ್ಲಿ, ಮುಖ್ಯವಾಗಿ ಪೆಟ್ಟು ಯಾ ಸೋಂಕಿನಿಂದ ರಕ್ತಕಟ್ಟಿ ಅದರಿಂದಾಗುವ, ನೋವು ಉರಿಗಳಿಂದ ಕೂಡಿದ ಊತ.