inflame ಇನ್‍ಹ್ಲೇಮ್‍
ಸಕರ್ಮಕ ಕ್ರಿಯಾಪದ
  1. ಉರಿ, ಜ್ವಾಲೆ – ಎಬ್ಬಿಸು; (ಉರಿ) ಹೊತ್ತಿಸು; ಕಿಚ್ಚೆಬ್ಬಿಸು.
  2. (ಉರಿಯಿಂದಲೋ ಎಂಬಂತೆ) ಬೆಳಗಿಸು; ಉಜ್ವಲಿಸುವಂತೆ ಮಾಡು; ಉಜ್ವಲಗೊಳಿಸು.
  3. ಕೆರಳಿಸು; ಉದ್ರೇಕಿಸು; ಉದ್ದೀಪಿಸು; ಪ್ರಚಂಡ ಭಾವೋದ್ವೇಗ ಉಂಟುಮಾಡು.
  4. (ಮೈ, ರಕ್ತ, ಮೊದಲಾದವನ್ನು ಜ್ವರ ಬಂದಂತೆ) ಕಾವೇರಿಸು; ತಾಪಗೊಳಿಸು.
  5. (ಉಗ್ರ ಪರಿಸ್ಥಿತಿಯನ್ನು) ಇನ್ನೂ ಉಗ್ರಗೊಳಿಸು; ಉಲ್ಬಣಗೊಳಿಸು; ಉರಿಯುವ ಬೆಂಕಿಗೆ ತುಪ್ಪ ಹೊಯ್ಯು.
ಅಕರ್ಮಕ ಕ್ರಿಯಾಪದ
  1. ಉರಿ – ಹೊತ್ತಿಕೊ, ಏಳು.
  2. (ಪರಿಸ್ಥಿತಿ) ಉಲ್ಬಣಿಸು; ಉಲ್ಬಣಗೊಳ್ಳು; ಇನ್ನೂ – ಉಗ್ರವಾಗು, ಹದಗೆಡು, ವಿಷಮಗೊಳ್ಳು.
  3. (ಮೈ ಮೊದಲಾದವು ಜ್ವರ ಬಂದಂತೆ) ಕಾವೇರು; ತಾಪಗೊಳ್ಳು.
  4. (ಮೈ ಮೊದಲಾದವು) ಊದಿಕೊಳ್ಳು; ಕೆರಳು; ಊದಿಕೊಂಡು ಉರಿ.