See also 2infinite
1infinite ಇನ್‍ಹಿನಿಟ್‍
ಗುಣವಾಚಕ
  1. ಅನಂತ; ಕೊನೆಯಿಲ್ಲದ; ಮಿತಿಯಿಲ್ಲದ; ಎಲ್ಲೆಯಿಲ್ಲದ; ಅಪಾರ; ಅಸೀಮ; ಅಪರಿಮಿತ.
  2. ಮಹತ್ತರ(ವಾದ); ಭಾರಿ.
  3. (ಬಹುವಚನದ ನಾಮವಾಚಕದೊಡನೆ) ಲೆಕ್ಕವಿಲ್ಲದಷ್ಟು; ಅಗಣಿತ; ಅಸಂಖ್ಯಾತ; ಅನೇಕಾನೇಕ; ಅಸಂಖ್ಯೇಯ.
  4. (ಗಣಿತ) ಅನಂತ; ಹೇಳಬಹುದಾದ ಪ್ರಮಾಣಕ್ಕಿಂತ ಯಾ ಎಣಿಸಬಹುದಾದ ಸಂಖ್ಯೆಗಿಂತ ದೊಡ್ಡದಾದ.
  5. (ಗಣಿತ) (ಶ್ರೇಣಿಯ ವಿಷಯದಲ್ಲಿ) ಅನಂತವಾಗಿ, ಅನಿರ್ದಿಷ್ಟವಾಗಿ – ಮುಂದುವರಿಸಬಹುದಾದ.
  6. (ವ್ಯಾಕರಣ, ಕ್ರಿಯಾರೂಪಗಳ ವಿಷಯದಲ್ಲಿ) ಅನಿರ್ದಿಷ್ಟ; ಪುರುಷ ಮತ್ತು ವಚನಗಳಿಂದ ನಿರ್ದಿಷ್ಟವಾಗಿಲ್ಲದ, ಬದ್ಧವಾಗಿಲ್ಲದ, ಪರಿಮಿತಗೊಂಡಿಲ್ಲದ, ಉದಾಹರಣೆಗೆ ಧಾತ್ವರ್ಥವಾಚಿ, ಕೃದಂತ, ಮೊದಲಾದವು.
See also 1infinite
2infinite ಇನ್‍ಹಿನಿಟ್‍
ನಾಮವಾಚಕ

ಎಲ್ಲೆಯಿಲ್ಲದ್ದು; ಪರಿಮಿತಿಯಿಲ್ಲದ್ದು; ಅಪಾರವಾದದ್ದು; ಅಸೀಮ; ಅಪರಿಮಿತ; ಅನಂತ.

ಪದಗುಚ್ಛ
  1. the Infinite (ಅನಂತಸ್ವರೂಪಿಯಾದ) ದೇವರು; ಭಗವಂತ.
  2. the infinite (ಅನಂತವಾದ, ಎಲ್ಲೆಯಿಲ್ಲದ) ಆಕಾಶ.