infatuate ಇನ್‍ಹ್ಯಾಟ್ಯುಏಟ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನ) ವಿವೇಕಗೆಡಿಸು; ಮತಿಗೆಡಿಸು; (ಒಬ್ಬನಲ್ಲಿ) ಅತಿ ಅವಿವೇಕ ಹುಟ್ಟುವಂತೆ ಮಾಡು; (ಒಬ್ಬನು) ತಿಳಿಗೇಡಿ; ಮತಿಗೇಡಿ – ಆಗುವಂತೆ ಮಾಡು.
  2. (ಮಿತಿಈರಿದ) ರಾಗಾವೇಶ ಹುಟ್ಟಿಸು; ರಾಗೋದ್ರೇಕವುಂಟುಮಾಡು; ಮೋಹಪರವಶಗೊಳಿಸು; ರಾಗೋನ್ಮತ್ತಗೊಳಿಸು; ವ್ಯಾಮೋಹವುಂಟು ಮಾಡು; ಮೋಹಾಂಧತೆ ಉಂಟುಮಾಡು: (ಮುಖ್ಯವಾಗಿ ಕಾಮದ) ಆವೇಶ ಹುಟ್ಟಿಸು.
ಪದಗುಚ್ಛ

infatuated with (ಯಾವುದೇ ಒಂದರ ಬಗ್ಗೆ ಅತಿಯಾದ, ಅವಿವೇಕದ) ವ್ಯಾಮೋಹ, ಪ್ರೀತಿ ಹೊಂದಿರು.