inexhaustible ಇನಿಗ್‍ಸಾಸ್ಟಿಬ್‍ಲ್‍
ಗುಣವಾಚಕ
  1. ಅಕ್ಷಯ; ಅವ್ಯಯ; ಪೂರೈಸಿ ಬಿಡಲಾಗದ; ಮುಗಿಸಿ ಬಿಡಲಾಗದ; ತೀರಿಸಿಬಿಡಲಾಗದ: inexhaustible store ಅಕ್ಷಯವಾದ ಸಂಗ್ರಹ.
  2. (ಪಾತ್ರೆ, ಭೋಜನ, ಮೊದಲಾದವುಗಳ ವಿಷಯದಲ್ಲಿ) ಬರಿದು ಮಾಡಲಾಗದ; ಖಾಲಿ ಮಾಡಲಾಗದ.
  3. (ಮನುಷ್ಯನ ಯಾ ಅವನ ಗುಣಗಳ ವಿಷಯದಲ್ಲಿ)
    1. ದಣಿಸಲಾಗದ; ಬಳಲಿಸಲಾಗದ.
    2. ಅನಾಯಾಸದ; ಆಯಾಸರಹಿತ; ದಣಿವಿಲ್ಲದ; ಬಳಲಿಕೆಯಿಲ್ಲದ; ಬಳಲದ.
    3. ಶಕ್ತಿಗುಂದದ; ಕಳೆಗುಂದದ.