inevitable ಇನ್‍ಎವಿಟಬ್‍ಲ್‍
ಗುಣವಾಚಕ
  1. ತಪ್ಪಿಸಿಕೊಳ್ಳಲಾಗದ; ಅನಿವಾರ್ಯ; ಅಪರಿಹಾರ್ಯ.
  2. ಖಂಡಿತ – ಆಗುವ, ನಡೆಯುವ, ಸಂಭವಿಸುವ, ಘಟಿಸುವ, ಅವಶ್ಯಂಭಾವಿ.
  3. (ಆಡುಮಾತು) ಸುಪರಿಚಿತ; ಬೇಸರ ಹಿಡಿಸುವಷ್ಟು ಯಾ ಚಿಟ್ಟು ಹಿಡಿಸುವಷ್ಟು ಪಳಕೆಯಾದ: the tourist with his inevitable camera ಸುಪರಿಚಿತ ಕ್ಯಾಮರಾ ಹಿಡಿದ ಪ್ರವಾಸಿಗ.
  4. (ಪಾತ್ರಗಳ ಸ್ವಭಾವ ಚಿತ್ರಣ, ಕಥಾವಸ್ತು ವಿಕಸನ, ಮೊದಲಾದವುಗಳ ವಿಷಯದಲ್ಲಿ) ಸತ್ಯ ಸಹಜವಾದ; ಸ್ವಾಭಾವಿಕವಾದ; ವಾಸ್ತವಿಕವಾದ; ಸಹಜತೆಯಿಂದ ಯಾ ನೈಜತೆಯಿಂದ ಮನವೊಪ್ಪುವ, ಸರ್ವಸಮ್ಮತವಾದ; ಬೇರೆ ರೀತಿಯ ವರ್ಣನೆಗೆ ಯಾ ನಿರ್ವಾಹಕ್ಕೆ ಅವಕಾಶವೇ ಇಲ್ಲದಷ್ಟು ಸಹಜವಾದ.