inequality ಇನಿ()ಕ್ವಾಲಿಟಿ
ನಾಮವಾಚಕ
  1. (ಪರಿಮಾಣ, ಗುಣ, ದರ್ಜೆ, ಸ್ಥಿತಿಗತಿಗಳು, ಮೊದಲಾದವುಗಳಲ್ಲಿ) ಅಸಮತೆ; ವಿಷಮತೆ; ಹೆಚ್ಚುಕಡಿಮೆಯಾಗಿರುವುದು.
  2. ವ್ಯತ್ಯಾಸವಾಗುವ – ಸ್ವಭಾವ, ಲಕ್ಷಣ.
  3. (ಮೇಲ್ಮೈಯ ವಿಷಯದಲ್ಲಿ) ಅಸಮತೆ; ಸಮವಾಗಿಲ್ಲದಿರುವುದು; ಮಟ್ಟವಾಗಿಲ್ಲದಿರುವುದು; ಉಬ್ಬುತಗ್ಗುಗಳುಳ್ಳದ್ದಾಗಿರುವುದು.
  4. (ಖಗೋಳ ವಿಜ್ಞಾನ) ಅಸಮತೆ; ಆಕಾಶಕಾಯವೊಂದರ ಚಲನೆಯಲ್ಲಿ ಆಗುವ ಕ್ರಮಭಂಗ ಯಾ ಹಾಗೆ ಉಂಟಾಗುವ ಕ್ರಮಭಂಗ ಪ್ರಮಾಣ.
  5. (ಗಣಿತ) ಎರಡು ಉಕ್ತಿಗಳು ಸಮವಲ್ಲವೆಂದು ಸೂಚಿಸುವ ಸೂತ್ರ; ವಿಷಮತಾಸೂತ್ರ; ಅಸಮತಾಸೂತ್ರ.