ineptitude ಇನೆಪ್ಟಿಟ್ಯೂಡ್‍
ನಾಮವಾಚಕ
  1. (ಉದ್ದೇಶಕ್ಕೆ ಸರಿಯಾಗಿ) ಹೊಂದದಿರುವಿಕೆ; ಹೊಂದಿಸಲಾರದಿರುವಿಕೆ; ತಕ್ಕದ್ದಲ್ಲದಾಗಿರುವಿಕೆ; ಅನುಚಿತತೆ; ಅನರ್ಹತೆ; ಅಸಮಂಜಸತೆ; ಅಸಾಂಗತ್ಯ; ಸಮಯೋಚಿತವಾಗಿಲ್ಲದಿರುವಿಕೆ; ಸಂದರ್ಭೋಚಿತವಾಗಿಲ್ಲದಿರುವಿಕೆ.
  2. ಅರ್ಥಶೂನ್ಯತೆ; ಅವಿವೇಕದಿಂದ ಕೂಡಿರುವಿಕೆ; ದಡ್ಡತನವನ್ನು, ಬುದ್ಧಿಶೂನ್ಯತೆಯನ್ನು – ತೋರಿಸುವಂತಿರುವಿಕೆ.
  3. ಅಕೌಶಲ.