induration ಇನ್‍ಡ್ಯುಅರೇಷನ್‍
ನಾಮವಾಚಕ
  1. ಗಟ್ಟಿಯಾಗಿಸುವಿಕೆ; ಗಡುಸಾಗುವಿಕೆ ಯಾ ಗಟ್ಟಿಯಾಗುವಿಕೆ; ಕಠಿನೀಕರಣ ಯಾ ಕಠಿನೀಭವನ.
  2. (ಭೂವಿಜ್ಞಾನ) ಸಂಚಯನ; ಸಂಚಿತಶಿಲೆಗಳಾಗಲು ಮಣ್ಣು ಒಟ್ಟಿಲಾಗುವುದು.
  3. (ಭೂವಿಜ್ಞಾನ) ಕಠಿನೀಕರಣ; ಗಡುಸಾಗುವಿಕೆ; ಶಾಖ ಮತ್ತು ಒತ್ತಡಗಳಿಂದ ಶಿಲೆಗಳು ಗಡುಸಾಗುವುದು.
  4. (ವೈದ್ಯಶಾಸ್ತ್ರ) (ಉರಿಯೂತ, ರಕ್ತಾಧಿಕ್ಯ, ಮೊದಲಾದ ಕಾರಣಗಳಿಂದ ದೇಹದ ಯಾವುದೇ ಭಾಗ) ಜಡ್ಡುಗಟ್ಟುವುದು.
  5. (ವೈದ್ಯಶಾಸ್ತ್ರ) ಜಡ್ಡುಗಟ್ಟಿದ ಭಾಗ ಯಾ ಅಂಗ.
  6. ಕಲ್ಲೆದೆಯಾಗುವಿಕೆ; ಕಠೋರ ಹೃದಯಿಯಾಗುವುದು.
  7. ಮೊಂಡುತನ; (ಮನಸ್ಸು, ಭಾವನೆ, ಮೊದಲಾದವು) ಜಡ್ಡುಹಿಡಿದ ಸ್ಥಿತಿ.