indulgence ಇನ್‍ಡಲ್ಜನ್ಸ್‍
ನಾಮವಾಚಕ
  1. ತೃಪ್ತಿಪಡಿಸುವಿಕೆ; ತಣಿಸುವಿಕೆ; ಇಚ್ಛೆ ಪೂರೈಕೆ; ಇಚ್ಛಾಪೂರ್ತಿ – ಮಾಡುವುದು, ಮಾಡಿಕೊಳ್ಳುವುದು.
  2. (ಇನ್ನೊಬ್ಬರ ವಿಷಯದಲ್ಲಿ) ಸಹನೆ; ತಾಳ್ಮೆ; ಸಮಾಧಾನ: let your indulgence set me free ತಾಳ್ಮೆಯಿಂದ ತಾವು ನನ್ನನ್ನು ಬಿಡುಗಡೆ ಮಾಡಿ.
  3. ಲೋಲುಪತೆ; ಸ್ವೇಚ್ಛಾತೃಪ್ತಿ; ತನ್ನ ಆಸೆಪಾಸೆಗಳನ್ನು ಪೂರೈಸಿಕೊಳ್ಳುವುದರಲ್ಲೇ ಮುಳುಗಿರುವುದು.
  4. ಅನುಗ್ರಹಿಸಿದ – ಸವಲತ್ತು, ಹಕ್ಕು, ವಿಶೇಷಾಧಿಕಾರ, ಮೊದಲಾದವು.
  5. (ರೋಮನ್‍ ಕ್ಯಾಥೊಲಿಕ್‍) ಶೇಷಪಾಪಕ್ಷಮೆ; ವಿಧಿವತ್ತಾಗಿ ಪಾಪಪರಿಹಾರ ಸಂಸ್ಕಾರವಾದ ಮೇಲೆ ಇಹದಲ್ಲಿ ಇನ್ನೂ ಅನುಭವಿಸಬೇಕಾಗಿರುವ ಶಿಕ್ಷೆಯನ್ನು ಕ್ಷಮಿಸುವುದು.
ಪದಗುಚ್ಛ

Declaration of Indulgence (ಮುಖ್ಯವಾಗಿ 1672ರಲ್ಲಿ ಇಂಗ್ಲೆಂಡಿನ ಎರಡನೆಯ ಚಾರ್ಲ್ಸ್‍ ದೊರೆಯೂ, 1687ರಲ್ಲಿ ಎರಡನೆಯ ಜೇಮ್ಸನೂ ಘೋಷಿಸಿದ) ಮತಸ್ವಾತಂತ್ರ್ಯ – ಘೋಷಣೆ, ಪ್ರಕಟಣೆ.