indulge ಇನ್‍ಡಲ್ಜ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು, ತನ್ನನ್ನು, ಇಷ್ಟ, ವಿಷಯ, ಮೊದಲಾದವುಗಳಲ್ಲಿ) ತೃಪ್ತಿಪಡಿಸು; ತುಷ್ಟಿಗೊಳಿಸು; ತಣಿಸು; ಪ್ರಸನ್ನಗೊಳಿಸು; ಇಚ್ಛಾಪೂರ್ತಿ ಮಾಡು, ಮಾಡಿಕೊ; ಚಪಲ ತೀರಿಸಿಕೊ: indulge one’s appetite for sweets ಸಿಹಿ ತಿನ್ನುವ ಆಸೆ ತಣಿಸಿಕೊ. indulge a child ಮಗುವಿನ ಆಸೆಗಳನ್ನು ಪೂರೈಸು.
  2. (ಯಾವುದನ್ನೇ) ಕೊಟ್ಟು ನೆರವಾಗು; ಉಪಕಾರ ಮಾಡು: indulged them with money ಅವರಿಗೆ ಹಣ ಕೊಟ್ಟು ಉಪಕಾರ ಮಾಡಿದ.
  3. (ಬಯಕೆ ಮೊದಲಾದವನ್ನು) ಸ್ವೇಚ್ಛೆಯಾಗಿ – ಬಿಡು, ಹರಿಯಗೊಡು: to indulge my own fancy ನನ್ನ ಕಲ್ಪನಾಲಹರಿಯನ್ನು ಹರಿಯಗೊಡಲೆಂದು.
ಅಕರ್ಮಕ ಕ್ರಿಯಾಪದ
  1. (ಕಠಿನವಾದ ಭಾಷೆ, ಸೈಕಲ್‍ಸವಾರಿ, ಚುಟ್ಟ, ಮೊದಲಾದವುಗಳಲ್ಲಿ) ಆಸಕ್ತನಾಗಿರು; ಲೋಲನಾಗಿರು; ರತನಾಗಿರು; ತೊಡಗಿರು; ಮನದಣಿಯೆ ತೃಪ್ತಿಪಡು.
  2. (ಆಡುಮಾತು) ಮಾದಕರತನಾಗಿರು; ಮದ್ಯ ಸೇವಿಸು, ಕುಡಿ.