induction ಇಂಡಕ್‍ಷನ್‍
ನಾಮವಾಚಕ
  1. ನೇಮಕ; ವಿಧಿವತ್ತಾಗಿ ಚರ್ಚಿನ ದತ್ತಿಯ ಅನುಭವಕ್ಕೆ ನೇಮಿಸುವುದು.
  2. ಸ್ಥಾಪನೆ; ಪ್ರತಿಷ್ಠಾಪನೆ.
  3. ಪ್ರವೇಶ.
  4. (ಪ್ರಾಚೀನ ಪ್ರಯೋಗ) ನಾಂದಿ; ಪೀಠಿಕೆ; ಉಪೋದ್ಘಾತ; ಮುನ್ನುಡಿ.
  5. (ಮುಖ್ಯವಾಗಿ ವೈದ್ಯಶಾಸ್ತ್ರ) ಕೃತಕ ವಿಧಾನದಿಂದ (ಮುಖ್ಯವಾಗಿ ಹೆರಿಗೆ) ಮಾಡಿಸುವುದು.
  6. ದೃಷ್ಟಾಂತ ಕೊಡುವುದು; ಸಾಮಾನ್ಯ ಪ್ರತಿಪಾದನೆಯನ್ನು ಸಮರ್ಥಿಸಲು ನಿದರ್ಶನಗಳನ್ನು ಮಂಡಿಸುವುದು, ಒದಗಿಸುವುದು.
  7. (ತರ್ಕಶಾಸ್ತ್ರ) ಅನುಗಮನ; ಕೆಲವು ನಿರ್ದಿಷ್ಟ ಉದಾಹರಣೆಗಳಿಂದ ಸಾಮಾನ್ಯಸೂತ್ರ ಕಲ್ಪಿಸುವುದು, ಕಟ್ಟುವುದು.
  8. (ಭೌತವಿಜ್ಞಾನ) ಚೋದನೆ:
    1. ವಿದ್ಯುತ್ತು ಅಥವಾ ಕಾಂತತೆಯ ಸಾಈಪ್ಯದಿಂದ (ಸಂಪರ್ಕದಿಂದಲ್ಲ) ವಿದ್ಯುತ್‍ ಯಾ ಕಾಂತಸ್ಥಿತಿಯನ್ನು ಉತ್ಪತ್ತಿಮಾಡುವುದು.
    2. (ಭೌತವಿಜ್ಞಾನ) ಕಾಂತಕ್ಷೇತ್ರವನ್ನು ಬದಲಾಯಿಸಿ ವಾಹಕದಲ್ಲಿ ವಿದ್ಯುತ್ತನ್ನು ಉತ್ಪಾದಿಸುವುದು.
  9. ಚೂಷಣೆ; ಅಂತರ್ದಹನಯಂತ್ರದ ಸಿಲಿಂಡರುಗಳಿಗೆ ಇಂಧನ ಮಿಶ್ರಣವನ್ನು ಎಳೆಯುವುದು, ಸೆಳೆಯುವುದು.
  10. (ಅಮೆರಿಕನ್‍ ಪ್ರಯೋಗ) ಸೈನಿಕ ಸೇವೆಗೆ ಸೇರಿಸಿಕೊಳ್ಳುವುದು, ದಾಖಲಾತಿ.