induce ಇನ್‍ಡ್ಯೂಸ್‍
ಸಕರ್ಮಕ ಕ್ರಿಯಾಪದ
  1. ಪ್ರೇರಿಸು; ಒಲಿಸು; ಒಪ್ಪಿಸು; ಮನವೊಲಿಸು: nothing shall induce me to do ಅದನ್ನು ಮಾಡಲು ನನ್ನನ್ನು ಯಾವುದೂ ಒಲಿಸಲಾರದು; ಅದನ್ನು ಮಾಡಲು ಎಂದೆಂದಿಗೂ ನಾನು ಒಪ್ಪೆನು.
  2. ಉಂಟುಮಾಡು; ಹುಟ್ಟಿಸು; ಆಗಿಸು; ಆಗಮಾಡು.
  3. (ವಿದ್ಯುದ್ವಿಜ್ಞಾನ) ಚೋದಿಸು; ಚೋದನೆಯಿಂದ ವಿದ್ಯುತ್‍ಪ್ರವಾಹವನ್ನು ಉಂಟುಮಾಡು.
  4. (ತರ್ಕಶಾಸ್ತ್ರ) ಅನುಗಮನದಿಂದ ಪಡೆ.
  5. (ಭೌತವಿಜ್ಞಾನ) ಘರ್ಷಣೆಯಿಂದ, ಹೊಡೆಯುವುದರಿಂದ (ರೇಡಿಯೋ ವಿಕಿರಣವನ್ನು) ಉಂಟುಮಾಡು.
  6. (ಮುಖ್ಯವಾಗಿ ವೈದ್ಯಶಾಸ್ತ್ರ) (ಹೆರಿಗೆಯನ್ನು) ಕೃತಕವಾಗಿ (ಅಂದರೆ ಔಷಧೋಪಚಾರ ಮಾಡಿ) ಮಾಡಿಸು: induce labour ಕೃತಕ ಪ್ರಯತ್ನದಿಂದ ಹೆರಿಗೆ ಮಾಡಿಸು.