1indiscernible ಇನ್‍ಡಿಸರ್ನ(ರ್ನಿ)ಬ್‍ಲ್‍
ಗುಣವಾಚಕ
  1. ವಿವೇಚಿಸಲಾಗದ; ಅವಿವೇಚನೀಯ; ಒಂದಕ್ಕೂ ಮತ್ತೊಂದಕ್ಕೂ ಭೇದ ತಿಳಿಯಲಾಗದ.
  2. ಅಸ್ಫುಟ; ಅಸ್ಪಷ್ಟ; ಸ್ಪಷ್ಟವಾಗಿ ಗೋಚರಿಸದ: his features were indiscernible ಅವನ ಮುಖಚಹರೆಗಳು ಅಸ್ಪಷ್ಟವಾಗಿದ್ದವು.
2indiscernible ಇನ್‍ಡಿಸರ್ನ(ರ್ನಿ)ಬ್‍ಲ್‍
ನಾಮವಾಚಕ
  1. ವಿವೇಚಿಸಲಾಗದ್ದು; ಅವಿವೇಚನೀಯ; ಒಂದಕ್ಕೂ ಮತ್ತೊಂದಕ್ಕೂ ಭೇದ ತಿಳಿಯಲಾರದಂಥದ್ದು.
  2. ಅಸ್ಪಷ್ಟ ಪ್ರಾಣಿ, ವಸ್ತು, ಭಾವನೆ, ಮೊದಲಾದವು.
ಪದಗುಚ್ಛ

identity of indiscernibles ಅವಿವೇಚಿತಗಳ ತಾದಾತ್ಮ್ಯ; ವಿಶೇಷಣಗಳು ಯಾ ಲಕ್ಷಣಗಳು ಭಿನ್ನವಾಗಿರದಿದ್ದಲ್ಲಿ ವಸ್ತುಗಳು ವಿಭಿನ್ನವಾಗಿರಲಾರವು ಎಂಬ ವಾದ; ಗುಣಗಳು ಬೇರೆ ಬೇರೆಯಾಗಿದ್ದ ಹೊರತು ವಸ್ತುಗಳು ಬೇರೆ ಬೇರೆಯಾಗಿರಲಾರವು ಎಂಬ ಸಿದ್ಧಾಂತ.