indirect ಇನ್‍ಡೈ(ಡಿ)ರೆಕ್ಟ್‍
ಗುಣವಾಚಕ
  1. (ದಾರಿ ಮೊದಲಾದವುಗಳ ವಿಷಯದಲ್ಲಿ) ನೇರವಾಗಿಲ್ಲದ; ಬಳಸಾದ.
  2. ಸುತ್ತುಬಳಸಿನ; ವಿಷಯಕ್ಕೆ ನೇರವಾಗಿ ಹೋಗದ.
  3. (ಅರ್ಥಶಾಸ್ತ್ರ) (ತೆರಿಗೆಗಳ ವಿಷಯದಲ್ಲಿ) ನೇರವಲ್ಲದ; ಅಪ್ರತ್ಯಕ್ಷ; ಪರೋಕ್ಷ; ತೆರಿಗೆ ಹಾಕಿದ ಸರಕಿಗೆ ಬಳಕೆದಾರ ಹೆಚ್ಚಿನ ಬೆಲೆಯ ರೂಪದಲ್ಲಿ ಕೊಡುವ.
  4. (ದೀಪದ ವಿಷಯದಲ್ಲಿ) ಪರೋಕ್ಷ; ಅಪ್ರತ್ಯಕ್ಷ; ಬಚ್ಚಿಟ್ಟ ಆಕರದಿಂದ ಬಂದು ಬೆಳಕು ಚದುರಿದ.
  5. ಅನುದ್ದಿಷ್ಟ; ಪರೋಕ್ಷ; ನೇರವಾಗಿ ಗುರಿಯಿಡದ, ಉದ್ದೇಶಿಸದ: indirect result ನೇರವಾಗಿ ಗುರಿಯಿಡದ ಫಲ; ಪರೋಕ್ಷಪರಿಣಾಮ.
  6. ಮೋಸದ; ಕಪಟದ; ಕುಟಿಲ; ಋಜುವಲ್ಲದ; ನೇರವಲ್ಲದ.