indifferent ಇನ್‍ಡಿಹರಂಟ್‍
ಗುಣವಾಚಕ
  1. ಅಸಡ್ಡೆಯ; ಅಲಕ್ಷ್ಯದ; ಅನಾದರದ; ತಾತ್ಸಾರದ; ಉದಾಸೀನ ಭಾವದ.
  2. ನಿಷ್ಪಕ್ಷಪಾತದ; ತಾಟಸ್ಥ್ಯ ಸ್ವಭಾವದ.
  3. ಸುಮಾರಾದ; ಸಾಧಾರಣ; ಒಳ್ಳೆಯದೂ ಅಲ್ಲದ, ಕೆಟ್ಟದ್ದೂ ಅಲ್ಲದ: an indifferent specimen (ತೀರ) ಸಾಧಾರಣವಾದ ನಮೂನೆ.
  4. ಅಷ್ಟೇನೂ ಒಳ್ಳೆಯದಲ್ಲದ; ಕೆಟ್ಟದ್ದೆಂದು ಎಣಿಸಬಹುದಾದ.
  5. ಬಹುತೇಕ ಕೆಟ್ಟದೆನ್ನಬಹುದಾದ.
  6. (ರಾಸಾಯನಿಕ, ವಿದ್ಯುತ್‍, ಕಾಂತ, ಮೊದಲಾದ ಗುಣಗಳಲ್ಲಿ) ತಟಸ್ಥವಾಗಿರುವ.
  7. ಗೌಣ; ಪ್ರಮುಖವಲ್ಲದ; ಅಪ್ರಧಾನವಾದ: whether you do it or not is quite indifferent ನೀನು ಅದನ್ನು ಮಾಡುತ್ತೀಯೋ ಬಿಡುತ್ತೀಯೋ, ಅದು ಮುಖ್ಯವಲ್ಲ.
ಪದಗುಚ್ಛ
  1. indifferent to
    1. ನಿಷ್ಪಕ್ಷಪಾತವಾಗಿ; ಯಾವುದರದೇ ಪರ ಯಾ ವಿರುದ್ಧ ಅಲ್ಲದೆ.
    2. ನಿರಾಸಕ್ತಿಯಿಂದ; ಯಾವುದೇ ಆಸಕ್ತಿ ಯಾ ಒಲವು ಇಲ್ಲದೆ.
  2. very indifferent ನಿಜವಾಗಿಯೂ ಕೆಟ್ಟದ್ದಾದ.