indifference ಇನ್‍ಡಿಹರನ್ಸ್‍
ನಾಮವಾಚಕ
  1. ಔದಾಸೀನ್ಯ; ಅನಾದರ; ಅನಾಸಕ್ತಿ; ಉಪೇಕ್ಷೆ; ಅಲಕ್ಷ್ಯ; ತಾತ್ಸಾರ; ಅಸಡ್ಡೆ; ಆಸಕ್ತಿ ಯಾ ಗಮನ ಇಲ್ಲದಿರುವುದು.
  2. ತಾಟಸ್ಥ್ಯ; ನಿಷ್ಪಕ್ಷಪಾತ; ಯಾವ ಕಡೆಗೂ ಒಲವಿಲ್ಲದಿರುವಿಕೆ: trusting in your wisdom and indifference ನಿನ್ನ ವಿವೇಕ ಹಾಗೂ ನಿಷ್ಪಕ್ಷಪಾತ ಸ್ವಭಾವವನ್ನು ನಂಬಿ.
  3. ಅಪ್ರಾಧಾನ್ಯ; ಅಪ್ರಾಮುಖ್ಯ: a matter of indifference ಅಪ್ರಾಮುಖ್ಯದ ವಿಷಯ.