indicator ಇನ್‍ಡಿಕೇಟರ್‍
ನಾಮವಾಚಕ
  1. ಸೂಚಕ:
    1. ಯಾವುದನ್ನೇ ಸೂಚಿಸುವ ವ್ಯಕ್ತಿ, ವಸ್ತು, ಮೊದಲಾದವು.
    2. ಯಂತ್ರಗಳ ಸ್ಥಿತಿ ಸೂಚಿಸಲು ಜೋಡಿಸಲಾಗಿರುವ ಸಾಧನ.
    3. ದಾಖಲೆ ಸೂಚಕ; ಉಪಕರಣ ಮೊದಲಾದವುಗಳಿಗೆ ಅಳವಡಿಸಿರುವ, ಯಾವುದನ್ನೇ ದಾಖಲಿಸುವ, ಸೂಚಿಸುವ ಸಾಧನ.
    4. (ರಸಾಯನವಿಜ್ಞಾನ) ದ್ರಾವಣದ ಆಈಯತೆ ಯಾ ಕ್ಷಾರೀಯತೆಯನ್ನು ಸಾಮಾನ್ಯವಾಗಿ ತನ್ನ ಬಣ್ಣದಿಂದ ಸೂಚಿಸಬಲ್ಲ ಪದಾರ್ಥ, ಸಾಮಾನ್ಯವಾಗಿ ಒಂದು ಕಾರ್ಬನಿಕ ವರ್ಣದ್ರವ್ಯ.
  2. ಸೂಚಕ ಫಲಕ; ರೈಲ್ವೆ ಸ್ಟೇಷನ್‍ ಮೊದಲಾದವುಗಳಲ್ಲಿ ಸದ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ಕೊಡುವ ಹಲಗೆ ಯಾ ಬೋರ್ಡು.
  3. ದಿಕ್ಕುಸೂಚಿ; ತಿರುಗುಸೂಚಕ; ಇಂಡಿಕೇಟರು; ವಾಹನ ಮೊದಲಾದವು ಎಡ ಯಾ ಬಲಕ್ಕೆ ತಿರುಗುವುದನ್ನು ಸೂಚಿಸಲು ಅದಕ್ಕೆ ಜೋಡಿಸಿರುವ ಒಂದು ಸಾಧನ (ಮುಖ್ಯವಾಗಿ ಹತ್ತಿ ಆರುವ ಕೆಂಪುದೀಪ).