See also 2index
1index ಇನ್‍ಡೆಕ್ಸ್‍
ನಾಮವಾಚಕ

(ಬಹುವಚನ indexes ಯಾ, ಮುಖ್ಯವಾಗಿ ತಂತ್ರವಿಜ್ಞಾನದಲ್ಲಿ indices ಉಚ್ಚಾರಣೆ ಇಂಡಿಸೀಸ್‍).

  1. ತೋರುಬೆರಳು; ತರ್ಜನಿ.
  2. (ಯಂತ್ರಸಲಕರಣೆಗಳಲ್ಲಿ) ಸೂಚಿ; ಅಳತೆ, ತೂಕ, ಮೊದಲಾದವನ್ನು ತೋರಿಸುವ ಮುಳ್ಳು.
  3. = index number.
  4. ಸೂಚಿ; ಯಾವುದೇ ಗುಣ ಯಾ ಲಕ್ಷಣವನ್ನು ಸೂಚಿಸಲು ಬಳಸುವ, ಮತ್ತು ಅಳತೆ ಮೊದಲಾದವುಗಳ ಮೇಲೆ ನಿರ್ಧರಿಸಲಾಗುವ ಒಂದು ಸಂಖ್ಯೆ ಯಾ ಪ್ರಮಾಣ (refractive index).
  5. ಮಾರ್ಗದರ್ಶಕ (ಸೂತ್ರ); ಅಭಿಸೂಚಕ; ಸೂಚನೆ.
  6. ನಿರ್ಧಾರಕ; ನಿರ್ಣಾಯಕ; ತೀರ್ಮಾನವನ್ನು ಸೂಚಿಸುವ ವಸ್ತು ಯಾ ವಿಷಯ.
  7. ಅಕಾರಾದಿ; ಅನುಕ್ರಮಣಿ; ಸಾಮಾನ್ಯವಾಗಿ ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ವಿಷಯಗಳು, ಹೆಸರುಗಳು, ಮೊದಲಾದವುಗಳ ಅಕಾರಾದಿ ಸೂಚಿ.
  8. = $^1$card index.
  9. (ಚರಿತ್ರೆ, Index) ನಿಷಿದ್ಧ ಪುಸ್ತಕ ಸೂಚಿ; ರೋಮನ್‍ ಕ್ಯಾಥೊಲಿಕ್‍ರಿಗೆ ನಿಷಿದ್ಧವಾಗಿರುವ ಯಾ ನಿಷಿದ್ಧ ಭಾಗಗಳನ್ನು ತೆಗೆದು ಹಾಕಿದ ಪುಸ್ತಕಗಳ ಪಟ್ಟಿ.
  10. (ಮುದ್ರಣ) ತೋರುಬೆರಳು ಗುರುತು; ತರ್ಜನಿ ಚಿಹ್ನೆ; ಟಿಪ್ಪಣಿ ಮೊದಲಾದವುಗಳತ್ತ ವಾಚಕರ ಗಮನ ಸೆಳೆಯಲು ಬಳಸುವ, ತೋರುಬೆರಳು ಚಾಚಿ, ಉಳಿದ ಬೆರಳುಗಳು ಒಳಮಡಿಸಿರುವ ಗುರುತು.
  11. (ಗಣಿತ) ಘಾತ; ಘಾತಾಂಕ; ಘಾತಸೂಚಿ; ಯಾವುದೇ ಮೊತ್ತದಲ್ಲಿ ನಿರ್ದಿಷ್ಟ ಸಂಖ್ಯೆ ಯಾ ಬೀಜಗಣಿತ ಸಂಕೇತ ಎಷ್ಟು ಸಲ ಅಪವರ್ತನವಾಗಿ ಬರುತ್ತದೆ ಎಂಬುದನ್ನು ಸೂಚಿಸುವ ಸಂಖ್ಯೆ ಯಾ ಸಂಕೇತ: 3 is the index of the term $x$ in the term $x^3y^2\cdot x^3y^2$ ಎಂಬಲ್ಲಿ $x$ನ ಘಾತ $3$.
See also 1index
2index ಇನ್‍ಡೆಕ್ಸ್‍
ಸಕರ್ಮಕ ಕ್ರಿಯಾಪದ
  1. (ಪುಸ್ತಕಕ್ಕೆ) ಅಕಾರಾದಿಯನ್ನು ರಚಿಸು; ಅನುಕ್ರಮಣಿ ಸೇರಿಸು.
  2. (ಪದ ಮೊದಲಾದವನ್ನು) ಅಕಾರಾದಿಯಲ್ಲಿ ಸೇರಿಸು.
  3. (ಕೂಲಿ ಮೊದಲಾದವನ್ನು) ಬೆಲೆ ಸೂಚ್ಯಂಕದೊಡನೆ ಸರಿ ಹೊಂದಿಸು.