indeterminate ಇನ್‍ಡಿಟರ್ಮಿನಟ್‍
ಗುಣವಾಚಕ
  1. (ವಿಸ್ತಾರ, ಲಕ್ಷಣ, ಮೊದಲಾದವುಗಳ ವಿಷಯದಲ್ಲಿ) ಅನಿರ್ಧಾರಿತ; ಅನಿರ್ಣೀತ; ಅನಿರ್ದಿಷ್ಟ; ಒಂದೂ ಗೊತ್ತಿಲ್ಲದ.
  2. ಸಂದಿಗ್ಧ; ಅನಿಶ್ಚಿತ.
  3. ಅಸ್ಪಷ್ಟ; ಅನಿಷ್ಕೃಷ್ಟ.
  4. (ಗಣಿತ) (ಸಂಖ್ಯೆ ಯಾ ರಾಶಿಯ ವಿಷಯದಲ್ಲಿ) ಅನಿರ್ಧಾರಿತ; ಅನಿರ್ಣೀತ; ನಿರ್ದಿಷ್ಟ ಮೌಲ್ಯವಿಲ್ಲದ, ಉದಾಹರಣೆಗೆ $\frac{ 0}{ 0}$.
  5. (ಗಣಿತ) (ಸಈಕರಣದ ವಿಷಯದಲ್ಲಿ) ಅನಿಯತ; ಬೀಜಾಂಕಗಳಿಗೆ ಲೆಕ್ಕವಿಲ್ಲದಷ್ಟು ಯಾ ಅಸಂಖ್ಯಾತ ಮೌಲ್ಯಗಳನ್ನು ಕೊಡಬಹುದಾದ.
ಪದಗುಚ್ಛ

indeterminate vowel ಅನಿಷ್ಕೃಷ್ಟ ಸ್ವರ, ಉದಾಹರಣೆಗೆ ago, moment, ಮೊದಲಾದವುಗಳಲ್ಲಿ ಓರೆ ಅಕ್ಷರದಿಂದ ಗುರುತಿಸಿರುವಂಥ ಸ್ವರದ ಶಬ್ದ, ಧ್ವನಿ.