See also 2indent  3indent
1indent ಇನ್‍ಡೆಂಟ್‍
ಸಕರ್ಮಕ ಕ್ರಿಯಾಪದ
  1. (ಯಾವುದೋ ಒಂದು ವಸ್ತುವಿನಲ್ಲಿ, ವಸ್ತುವಿನ ಮೇಲೆ) ಹಲ್ಲು ಮಾಡು; ಹಲ್ಲಿನಂಥ ಕಚ್ಚುಗಳನ್ನು ಮಾಡು; ಮೊನೆಯಾಕಾರದ ಗುರುತುಮಾಡು: an indented stick ಹಲ್ಲುಕೋಲು; ಕ್ಷತದಂಡ; ಕಚ್ಚು ಮಾಡಿದ ಕೋಲು.
  2. (ಕರಾವಳಿ ಮೊದಲಾದವುಗಳಲ್ಲಿ) ಕೋಚುಕೊರೆ; ಉದ್ದನೆಯ ಕೋಚುಗಳನ್ನುಂಟುಮಾಡು; ಒಳಚಾಚುಗಳನ್ನು ಕೊರೆ: the coastline is indented by the sea into small bays ಸಮುದ್ರವು ಕರಾವಳಿ ಅಂಚನ್ನು ಕೋಚುಕೋಚಾಗಿ ಕೊರೆದು ಸಣ್ಣ ಕೊಲ್ಲಿಗಳನ್ನು ಮಾಡಿದೆ.
  3. ಕೋಚಾಗಿ – ಹರಿ, ಕತ್ತರಿಸು, ವಿಭಾಗಿಸು; ದುಪ್ರತಿಯಾಗಿ ತಯಾರಿಸಿದ ದಸ್ತೈವಜನ್ನು ಅಂಚುಗಳು ಕೋಚುಕೋಚಾಗಿರುವಂತೆ (ಕೂಡಿಸಿದಾಗ ಎರಡು ಭಾಗಗಳ ಅಂಚುಗಳು ಒಂದಕ್ಕೊಂದು ಹೊಂದಿಕೊಂಡು, ಒಂದೇ ದಸ್ತಾವೇಜಿನ ಭಾಗಗಳೆಂದು ತೋರಿಸಲು ಸಾಧ್ಯವಾಗುವಂತೆ) ಕತ್ತರಿಸು, ವಿಭಾಗಿಸು.
  4. (ದಸ್ತೈವಜನ್ನು) ಕರಾರುವಾಕ್ಕಾದ ದುಯ್ಯಂಪ್ರತಿ ಯಾ ದುಪ್ರತಿ ಮಾಡು.
  5. (ಮುದ್ರಣ ಮೊದಲಾದವುಗಳಲ್ಲಿ) ಒಳತಳ್ಳು; ಒಳಸರಿಸು; ಬೇರೆ ಪ್ಯಾರಾವನ್ನು ಪ್ರಾರಂಭಿಸುವಾಗ ಮೊದಲ ಪಂಕ್ತಿಯನ್ನು ಮುದ್ರಣದ ಇತರ ಸಾಲುಗಳ ನೇರದಿಂದ ಸ್ವಲ್ಪ ಒಳಕ್ಕೆ ತಳ್ಳು.
  6. (ಬ್ರಿಟಿಷ್‍ ಪ್ರಯೋಗ) ಕೋರಿಕೆ ಕಳುಹಿಸು; (ಸಾಮಾನ್ಯವಾಗಿ ದುಪ್ರತಿ ಬರಹದಲ್ಲಿ) ಯಾವುದಾದರೂ ಪದಾರ್ಥಕ್ಕಾಗಿ ವ್ಯಕ್ತಿಯನ್ನು ಕೋರು, ಕೇಳು.
ಅಕರ್ಮಕ ಕ್ರಿಯಾಪದ
  1. (ಬ್ರಿಟಿಷ್‍ ಪ್ರಯೋಗ) (ಬೇಕಾದ ಸಾಮಾನಿಗಾಗಿ) ಕೋರಿಕೆ ಪತ್ರ ಕಳುಹಿಸು.
  2. ಕೋರಿಕೆಪತ್ರದ ಮೂಲಕ (ಸರಕುಗಳನ್ನು) ಕೋರು.
See also 1indent  3indent
2indent ಇನ್‍ಡೆಂಟ್‍
ನಾಮವಾಚಕ
  1. ಕಚ್ಚು ಕಚ್ಚಾಗಿರುವುದು; ಕಚ್ಚು ಕಚ್ಚು – ಮಾಡಿರುವುದು, ಮಾಡುವುದು.
  2. ಕಚ್ಚು; ಹಳ್ಳ; ತಗ್ಗು; ನೆಗ್ಗು.
  3. ಕಚ್ಚು ಪ್ರತಿ; ಕಚ್ಚುಕಚ್ಚಾಗಿ ಕತ್ತರಿಸಬಹುದಾದ, ಬೇರ್ಪಡಿಸಬಹುದಾದ ದಸ್ತೈವಜಿನ ಪ್ರತಿ.
  4. (ಬ್ರಿಟಿಷ್‍ ಪ್ರಯೋಗ) ಸಾಮಾನು ಸರಂಜಾಮುಗಳಿಗಾಗಿ ಸಲ್ಲಿಸಿದ ಅಧಿಕೃತ ಕೋರಿಕೆ ಪತ್ರ.
  5. (ಬ್ರಿಟಿಷ್‍ ಪ್ರಯೋಗ) (ಸರಕಿಗಾಗಿ, ಮುಖ್ಯವಾಗಿ ಹೊರಗಿನಿಂದ ಬಂದ) ಕೋರಿಕೆ (ಪತ್ರ).
See also 1indent  2indent
3indent ಇನ್‍ಡೆಂಟ್‍
ಸಕರ್ಮಕ ಕ್ರಿಯಾಪದ
  1. ಒಳಕ್ಕೆ – ತಗ್ಗಿಸು, ನೆಗ್ಗಿಸು; ಒತ್ತಿ ಗುರುತು ಬೀಳುವಂತೆ ಮಾಡು: the spectacles indented the sides of the nose ಕನ್ನಡಕ ಮೂಗಿನ ಎರಡು ಕಡೆಯಲ್ಲೂ ಒತ್ತಿ ಗುರುತು ಬೀಳಿಸಿತು.
  2. (ಗುರುತು ಮೊದಲಾದವನ್ನು) ಒತ್ತು; ಛಾಪಿಸು; ಮುದ್ರಿಸು: indent a pattern on metal ಲೋಹದ ಮೇಲೆ ಚಿತ್ರ ಒತ್ತು, ಛಾಪಿಸು.