indemnity ಇನ್‍ಡೆಮ್ನಿಟಿ
ನಾಮವಾಚಕ
  1. (ಕೆಡುಕು ಯಾ ನಷ್ಟ ಆಗದಂತೆ) ರಕ್ಷಣೆ (ಕೊಡುವುದು); ಸುಭದ್ರತೆ; ಭದ್ರಪಡಿಸುವುದು.
  2. (ನ್ಯಾಯಶಾಸ್ತ್ರ) ವಿನಾಯಿತಿ; ತೆರಬೇಕಾದ ದಂಡ ಮೊದಲಾದವುಗಳಿಂದ ನ್ಯಾಯಬದ್ಧವಾದ ವಿನಾಯಿತಿ.
  3. ನಷ್ಟ ಪರಿಹಾರ; ನಷ್ಟಭರ್ತಿ; ಪಟ್ಟ ನಷ್ಟಕ್ಕೆ ಪ್ರತಿಯಾದ ಪರಿಹಾರ.
  4. ಪರಿಹಾರಧನ; ನಷ್ಟ ಪರಿಹಾರದ ಮೊಬಲಗು; ಪಟ್ಟ ನಷ್ಟಕ್ಕೆ ಪ್ರತಿಯಾಗಿ ಕೊಟ್ಟ ಪರಿಹಾರದ ಹಣ; ಮುಖ್ಯವಾಗಿ ಯುದ್ಧದಲ್ಲಿ ಗೆದ್ದವನು ಸೋತವನೊಡನೆ ರಾಜಿ ಮಾಡಿಕೊಳ್ಳಲು ನಷ್ಟ ಪರಿಹಾರವಾಗಿ ಒತ್ತಾಯದಿಂದ ಪಡೆಯುವ ಹಣ.