indefinite ಇನ್‍ಡೆಹಿನಿಟ್‍
ಗುಣವಾಚಕ
  1. ಅನಿಶ್ಚಿತ; ಅನಿರ್ದಿಷ್ಟ; ಅಸ್ಪಷ್ಟ.
  2. ಅಮಿತ; ಅಪರಿಮಿತ.
  3. ಅನಿಯತ; ಅನಿಷ್ಕೃಷ್ಟ.
  4. (ವ್ಯಾಕರಣ) (ಗುಣವಾಚಕ, ಸರ್ವನಾಮ, ಮೊದಲಾದವುಗಳ ವಿಷಯದಲ್ಲಿ) ಅನಿರ್ದೇಶಕ; ಕಾಲ, ಪುರುಷ, ಮೊದಲಾದವನ್ನು ನಿರ್ದೇಶಿಸದ, ಉದಾಹರಣೆಗೆ, a, an, any, some.
  5. (ಕ್ರಿಯೆಯ, ಕಾಲದ ವಿಷಯದಲ್ಲಿ) ಅನಿರ್ದೇಶಕ; ಕ್ರಿಯೆ ನಡೆಯುತ್ತಿದೆಯೋ ಮುಗಿಯಿತೋ ಎಂಬುದನ್ನು ಸೂಚಿಸದ: I saw the show ಎಂಬ ವಾಕ್ಯದಲ್ಲಿ saw ಎಂಬ ಕ್ರಿಯಾಪದವು see ಎಂಬುದರ ಅನಿರ್ದೇಶಕ ಭೂತಕಾಲ ರೂಪ.
  6. (ಸಸ್ಯವಿಜ್ಞಾನ)
    1. (ಶಲಾಕೆಗಳ ವಿಷಯದಲ್ಲಿ) ಬಹುಸಂಖ್ಯೆಯ; ಸುಲಭವಾಗಿ ಎಣಿಸಲಾಗದ.
    2. (ಪುಷ್ಪವಿನ್ಯಾಸದ ವಿಷಯದಲ್ಲಿ) ಅನಿಷ್ಕೃಷ್ಟ; ಅನಿಯತ.