incubate ಇನ್‍ಕ್ಯುಬೇಟ್‍
ಸಕರ್ಮಕ ಕ್ರಿಯಾಪದ
  1. (ಮೊಟ್ಟೆಗಳ ಮೇಲೆ ಕುಳಿತು ಕಾವುಕೊಟ್ಟು ಯಾ ಕೃತಕ ಕಾವಿನಿಂದ) ಮೊಟ್ಟೆಗಳನ್ನು ಮರಿಮಾಡು.
  2. (ಅನುಕೂಲ ಪರಿಸ್ಥಿತಿ ಕಲ್ಪಿಸಿ ರೋಗಾಣು ಮೊದಲಾದವನ್ನು) ಬೆಳೆಸು; ಬೆಳೆಯುವಂತೆ ಮಾಡು.
  3. (ರೂಪಕವಾಗಿ) ಚಿಂತಿಸಿ ರೂಪ ಕೊಡು: incubated the new idea ಚಿಂತಿಸಿ ಹೊಸ ಕಲ್ಪನೆಗೆ ರೂಪವಿತ್ತ.
ಅಕರ್ಮಕ ಕ್ರಿಯಾಪದ
  1. ಮೊಟ್ಟೆಯೊಡೆದು ಮರಿಯಾಗು.
  2. ಹೊದಗು; ಕಾವು ಕೂರು; ಮೊಟ್ಟೆಗಳ ಮೇಲೆ (ಕಾವು ಕೊಡಲು) ಕುಳಿತುಕೊ.
  3. (ರೂಪಕವಾಗಿ) (ಚಿಂತನದಿಂದ) ರೂಪತಳೆ; ಮೈತಾಳು.