incrustation ಇನ್‍ಕ್ರಸ್ಟೇಷನ್‍
ನಾಮವಾಚಕ
  1. ಹೊರಪೊರೆಕಟ್ಟುವುದು; ಹೊರಮೈ – ಗಡುಸಾಗುವುದು. ಗಟ್ಟಿಯಾಗುವುದು.
  2. ಗಟ್ಟಿಗೊಂಡ ಹೊರಪದರ, ಹೊರಪೊರೆ.
  3. (ಕಟ್ಟಡಕ್ಕೆ ಅಮೃತಶಿಲೆ ಮೊದಲಾದವುಗಳಿಂದ ರಚಿಸಿದ) ಮುಖಗಟ್ಟು; ಮುಖ ಕವಚ.
  4. ಪದರರಚನೆ; ಯಾವುದೇ ಮೇಲ್ಮೈ ಮೇಲೆ – ಗಡ್ಡೆಗಟ್ಟುವಿಕೆ, ಮುದ್ದೆಗಟ್ಟುವಿಕೆ, ಪದರಗಟ್ಟುವಿಕೆ.
  5. (ರೂಪಕವಾಗಿ) (ಅಭಿಪ್ರಾಯಗಳ ವಿಷಯದಲ್ಲಿ) ಅಭ್ಯಾಸ ಜಡ್ಡುಗಟ್ಟಿರುವಿಕೆ.
  6. ಹೊಕ್ಕು; ಹಕ್ಕಳೆ; ಹುರುಕು.