incorporeal ಇನ್‍ಕಾರ್ಪೋರಿಅಲ್‍
ಗುಣವಾಚಕ
  1. ಅಭೌತ; ಜಡಪದಾರ್ಥದಿಂದ ಯಾ ದ್ರವ್ಯದಿಂದ ರಚಿತವಾಗಿರದ.
  2. ಅಮೂರ್ತ; ದೇಹವಿಲ್ಲದ; ಅಶರೀರಿಯಾದ.
  3. ಅಶರೀರಿಗಳ; ಅಪ್ರಾಕೃತ, ಅಮೂರ್ತ – ವ್ಯಕ್ತಿಗಳ.
  4. (ನ್ಯಾಯಶಾಸ್ತ್ರ) ಅಮೂರ್ತ; ಅವಾಸ್ತುಭೂತ; ವಸ್ತುಭೂತವಲ್ಲದ; ಭೌತಅಸ್ತಿತ್ವವಿಲ್ಲದ; ನಿಜ ವಸ್ತುವಾಗಿರದೆ ಕಾನೂನಿನ ಭಾವನೆಯಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ (ಉದಾಹರಣೆಗೆ ಓಟಿನ ಹಕ್ಕು).
ಪದಗುಚ್ಛ

incorporeal hereditament ಅವಸ್ತುಭೂತ ಪಿತ್ರಾರ್ಜಿತ ಸ್ವತ್ತು; ತನಗೆ ವಾಸ್ತವಿಕ ಅಸ್ತಿತ್ವವಿಲ್ಲದಿದ್ದರೂ ಒಂದು ಪ್ರತ್ಯಕ್ಷ ವಸ್ತುವಿಗೆ ಹಕ್ಕಾಗಿ ಯಾ ಲಾಭವಾಗಿ ಸಂಬಂಧಪಟ್ಟಿರುವ ಪಿತ್ರಾರ್ಜಿತ ಸ್ವತ್ತು.