See also 2incorporate
1incorporate ಇನ್‍ಕಾರ್ಪರಟ್‍
ಗುಣವಾಚಕ
  1. (ವಾಣಿಜ್ಯ ಸಂಸ್ಥೆ ಮೊದಲಾದವುಗಳ ವಿಷಯದಲ್ಲಿ) ಏಕೀಕೃತ; ಸಂಯೋಜಿತ; ಸಂಘಟಿತ; ಹಲವು ಸಂಸ್ಥೆಗಳು ಒಂದುಗೂಡಿ ಒಂದೇ ಸಂಸ್ಥೆಯಾಗಿರುವ.
  2. (ವ್ಯಕ್ತಿಗಳ ವಿಷಯದಲ್ಲಿ) ಸಂಘಟಿತವಾದ; ಹಲವರು ಒಂದಾಗಿ ಒಂದು ಸಂಘ ಯಾ ಕೂಟವಾಗುವ.
  3. ಮೈವೆತ್ತ; ಮೈದಳೆದ; ದೇಹ ಧರಿಸಿದ; ಮೂರ್ತೀಕರಿಸಿದ.
See also 1incorporate
2incorporate ಇನ್‍ಕಾರ್ಪರೇಟ್‍
ಸಕರ್ಮಕ ಕ್ರಿಯಾಪದ
  1. (ಒಂದೇ ಸಂಸ್ಥೆಯಲ್ಲಿ ಯಾ ಇನ್ನೊಂದರೊಡನೆ, ಇತರರೊಡನೆ) ಒಟ್ಟುಗೂಡಿಸು; ಒಂದಾಗಿಸು; ಸೇರಿಸು; ಒಂದುಗೂಡಿಸು; ಸಂಘಟಿಸು; ಏಕೀಕರಿಸು.
  2. (ಮುಖ್ಯವಾಗಿ ಸಂಸ್ಥೆ ಮೊದಲಾದವುಗಳಲ್ಲಿ) ಸದಸ್ಯನನ್ನಾಗಿಸು; ಸದಸ್ಯನನ್ನಾಗಿ ಸೇರಿಸಿಕೊ.
  3. (ಅಂಶಗಳನ್ನು, ಘಟಕಗಳನ್ನು, ಕೂಡಿಸಿ ಒಂದೇ ಪದಾರ್ಥವಾಗಿ) ಸಂಯೋಜಿಸು; ಸಂಘಟಿಸು.
  4. (ಕಾನೂನುಬದ್ಧ) ಸಂಸ್ಥೆಯಾಗಿ ರಚಿಸು.
ಅಕರ್ಮಕ ಕ್ರಿಯಾಪದ
  1. (ಒಂದೇ ಸಂಸ್ಥೆಯಲ್ಲಿ) ಸೇರು; ಒಂದಾಗು; ಸಂಘಟಿತವಾಗು; ಏಕೀಕೃತವಾಗು;
  2. (ಅಂಶಗಳ, ಘಟಕಗಳ ವಿಷಯದಲ್ಲಿ, ಒಂದೇ ಪದಾರ್ಥವಾಗಿ) ಒಂದುಗೂಡು; ಸಂಘಟಿತವಾಗು; ಸಂಯೋಜಿತವಾಗು; ಸಂಯುಕ್ತವಾಗು.
  3. (ಬೇರೊಂದರೊಡನೆ) ಒಂದಾಗು; ಏಕೀಕೃತವಾಗು.