1incomprehensible ಇನ್‍ಕಾಂಪ್ರಿಹೆನ್ಸಿಬ್‍ಲ್‍
ಗುಣವಾಚಕ
  1. ಅವೇದ್ಯ; ಅಗ್ರಾಹ್ಯ; ದುರವಗಾಹ; ಅರಿಯಲಾಗದ; ಗ್ರಹಿಸಲಾಗದ; ಅರ್ಥಮಾಡಿಕೊಳ್ಳಲಾಗದ; ತಿಳಿದುಕೊಳ್ಳಲಾಗದ.
  2. (ಪ್ರಾಚೀನ ಪ್ರಯೋಗ) ಮಿತಿಗಳಿಲ್ಲದ; ಅಪರಿಮಿತ.
ಪದಗುಚ್ಛ

incomprehensible to = 1incomprehensible(1).

2incomprehensible ಇನ್‍ಕಾಂಪ್ರಿಹೆನ್ಸಿಬ್‍ಲ್‍
ನಾಮವಾಚಕ

(ಮುಖ್ಯವಾಗಿ ಬಹುವಚನದಲ್ಲಿ) ಅಜ್ಞೇಯ; ಅವೇದ್ಯವಾದದ್ದು; ಅಗ್ರಾಹ್ಯವಾದದ್ದು; ತಿಳಿವಿಗೆ, ಅರಿವಿಗೆ ಅಸಾಧ್ಯವಾದದ್ದು.

ಪದಗುಚ್ಛ

the three incomprehensibles (ಅಥನೇಷಿಯನ್‍ ಸಿದ್ಧಾಂತ) (ಕ್ರೈಸ್ತ) ಅಜ್ಞೇಯತ್ರಯ; ಅಗ್ರಾಹ್ಯ ತ್ರಿಮೂರ್ತಿ; ದೇವರು, ದೇವಪುತ್ರ (ಏಸು ಕ್ರಿಸ್ತ) ಮತ್ತು ಪವಿತ್ರ ಆತ್ಮ.