incommunicably ಇನ್‍ಕಮ್ಯೂನಿಕಬ್ಲಿ
ಕ್ರಿಯಾವಿಶೇಷಣ
  1. ಅವಿಭಾಜ್ಯವಾಗಿ; ಇತರರಿಗೆ ಹಂಚಿಕೊಡಲಾಗದ ರೀತಿಯಲ್ಲಿ, ಪಾಲುಮಾಡಿಕೊಡಲಾಗದಂತೆ.
  2. ಅನಿರ್ವಚನೀಯವಾಗಿ; ಇತರರಿಗೆ ತಿಳಿಸಲಾಗದಂತೆ ಯಾ ಹೇಳಲಾಗದಂತೆ.
  3. ಸಂಪರ್ಕರಹಿತವಾಗಿ; ಪರಸ್ಪರ ಸಲ್ಲಾಪ, ಸಂಪರ್ಕಗಳಿಲ್ಲದೆ: each, in his own little world, stood incommunicably separate ಒಬ್ಬೊಬ್ಬನೂ ತನ್ನದೇ ಆದ ಪುಟ್ಟ ಪ್ರಪಂಚದಲ್ಲಿ ಪರಸ್ಪರ ಸಂಪರ್ಕ ಸಲ್ಲಾಪಗಳೇ ಇಲ್ಲದೆ ಪೃಥಕ್ಕಾಗಿ ನಿಂತಿದ್ದ.