incommunicable ಇನ್‍ಕಮ್ಯೂನಿಕಬ್‍ಲ್‍
ಗುಣವಾಚಕ
  1. (ಇತರರಿಗೆ) ಕೊಡಲಾಗದ; ಹಂಚಲಾಗದ; ಪಾಲು ಮಾಡಿಕೊಡಲಾಗದ; ಅವಿಭಾಜ್ಯ; ಅಪ್ರಮೇಯ: incommunicable power of the Crown ರಾಜನ ಅವಿಭಾಜ್ಯವಾದ ಯಾ ಇತರರೊಡನೆ ಹಂಚಿಕೊಳ್ಳಲಾಗದ – ಶಕ್ತಿ, ಅಧಿಕಾರ. incommunicable joy ಇತರರಿಗೆ ಪಾಲುಮಾಡಿಕೊಡಲಾಗದ ಸಂತೋಷ.
  2. ಅನಿರ್ವಚನೀಯ; ಅಪ್ರಕಾಶ್ಯ; ಇತರರಿಗೆ ಮಾತಿನ ಮೂಲಕ ತಿಳಿಸಲಾಗದ ಯಾ ಹೇಳಲಾಗದ.
  3. ಮಿತಭಾಷಿಯಾದ; ಮೌನ ಪ್ರಕೃತಿಯ; ತುಟಿ ಬಿಚ್ಚದ; ತಿಳಿಸಲು ಯಾ ಹೇಳಲು ಇಚ್ಛಿಸದ.
  4. ಸಂಪರ್ಕರಹಿತ; ಪರಸ್ಪರ ಸಂಪರ್ಕವಿಲ್ಲದ; ಸಲ್ಲಾಪ, ಮಾತುಕತೆ ಇಲ್ಲದ.