incommensurable ಇನ್‍ಕಮೆನ್‍ಷ(ಷು)ರಬ್‍ಲ್‍
ಗುಣವಾಚಕ
  1. (ಗಣಿತ)
    1. ಅಪರಿಮೇಯ; (ಇನ್ನೊಂದು ಸಂಖ್ಯೆಯ ವಿಷಯದಲ್ಲಿ) ಸಾಮಾನ್ಯ ಅಪವರ್ತನವಿಲ್ಲದ.
    2. (ಸಂಖ್ಯೆಯ ವಿಷಯದಲ್ಲಿ) ವಾಸ್ತವಿಕವಾದರೂ ಎರಡು ಸಂಖ್ಯೆಗಳ ಪ್ರಮಾಣದ ರೂಪದಲ್ಲಿ ($x/y$ ಎಂದು) ಸೂಚಿಸಲಾಗದ: $\pi\sqrt{ 2}$.
  2. (ಪರಿಮಾಣದ ವಿಷಯದಲ್ಲಿ) ಹೋಲಿಸಲಾಗದ; ಅತುಲನೀಯ.
  3. ತುಲನಾರ್ಹವಲ್ಲದ; (ಬೇರೊಂದರೊಡನೆ ಹೋಲಿಸಲು) ಅರ್ಹವಲ್ಲದ; ಅನುಪಮಾರ್ಹ.