See also 2incline
1incline ಇನ್‍ಕ್ಲೈನ್‍
ಸಕರ್ಮಕ ಕ್ರಿಯಾಪದ
  1. (ತಲೆ, ಮೈ, ಮೊದಲಾದವನ್ನು ಯಾ ತನ್ನನ್ನೇ ಮುಂದಕ್ಕೆ ಯಾ ಕೆಳಕ್ಕೆ) ಬಾಗಿಸು; ಬಗ್ಗಿಸು; ಓಲಿಸು.
  2. (ಮನುಷ್ಯನನ್ನು, ಮನವನ್ನು, ಹೃದಯವನ್ನು, ಯಾವುದೇ ವಸ್ತುವಿನ ಯಾ ವಿಷಯದ ಕಡೆಗೆ ಯಾ ಯಾವುದೇ ಕಾರ್ಯ ಮಾಡಲು) ಒಲಿಸು; ಒಲವುಗೊಳಿಸು; ಪ್ರವೃತ್ತಗೊಳಿಸು: incline our hearts to keep this law ಈ ಕಾನೂನನ್ನು ಪಾಲಿಸಲು ನಮ್ಮ ಮನವೊಲಿಸು. I am inclined to think so ಹಾಗೆಂದು ಯೋಚಿಸುವ ಪ್ರವೃತ್ತಿಯುಳ್ಳವನಾಗಿದ್ದೇನೆ.
  3. (ಲಂಬ ಮೊದಲಾದವುಗಳಿಂದ) ಓಲಿಸು; ಬಾಗಿಸು; ಬಗ್ಗಿರುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಒಲವುಳ್ಳವನಾಗಿರು; ಪ್ರವೃತ್ತಿಯುಳ್ಳವನಾಗಿರು.
  2. (ಲಂಬ ಮೊದಲಾದವುಗಳಿಂದ) ಓಲು; ಬಾಗು; ಮಾಲು.
  3. (ಬೊಜ್ಜು ಬೆಳೆಯುವುದು ಮೊದಲಾದ) ಪ್ರವೃತ್ತಿಯುಳ್ಳವನಾಗಿರು.
ನುಡಿಗಟ್ಟು

incline one’s ear (ಉಪಕಾರ ಮಾಡುವ ದೃಷ್ಟಿಯಿಂದ) ಕಿವಿಗೊಡು; ಕಿವಿಗೊಟ್ಟು ಕೇಳು.

See also 1incline
2incline ಇನ್‍ಕ್ಲೈನ್‍
ನಾಮವಾಚಕ
  1. = inclined plane.
  2. ಇಳುಕಲು; ಇಳಿಜಾರು; ಓರೆ; ಉತಾರು; ಬಾಗು; ಓಲು.