inclination ಇನ್‍ಕ್ಲಿನೇಷನ್‍
ನಾಮವಾಚಕ
  1. ಬಾಗು; ಓರೆ; ಓಲು; ಇಳುಕಲು; ಇಳಿಜಾರು; ಪ್ರವಣತೆ; ಉತಾರು.
  2. (ಕಾಂತಸೂಜಿಯ) ನಮನ; ತಿರುಗಾಣಿಯ ಮೇಲೆ ಕೂರಿಸಿರುವ ಕಾಂತಸೂಜಿಯನ್ನೊಳಗೊಳ್ಳುವ ಊರ್ಧ್ವಮುಖ ಸಮತಲದಲ್ಲಿ ಆ ಸೂಜಿಗೂ ಅಲ್ಲಿಯ ಕ್ಷಿತಿಜೀಯ ರೇಖೆಗೂ ನಡುವೆ ಇರುವ ಕೋನ.
  3. ನತಿ; ಪ್ರವಣ ಪ್ರಮಾಣ; ಎರಡು ಸರಳರೇಖೆಗಳ ಯಾ ಸಮತಲಗಳ ದಿಕ್ಕುಗಳ ನಡುವಣ (ಮುಖ್ಯವಾಗಿ ಅವುಗಳ ನಡುವಣ ಕೋನದ ಅಳತೆಯಿಂದ ಮಾಡಿದ) ವ್ಯತ್ಯಾಸ.
  4. ಒಲವು; ಪ್ರವೃತ್ತಿ.
  5. ಇಷ್ಟ; ಪ್ರೀತಿ; ಒಲುಮೆ.