See also 2incident
1incident ಇನ್ಸಿಡಂಟ್‍
ನಾಮವಾಚಕ
  1. ಆನುಷಂಗಿಕ ಸಂಗತಿ; ಪ್ರಾಸಂಗಿಕ ಘಟನೆ; ಯಾವುದಕ್ಕೋ ಅಧೀನವಾದ ಯಾ ಸಹಾಯಕವಾದ ಘಟನೆ.
  2. ಆದದ್ದು; ನಡೆದದ್ದು; ಘಟನೆ; ಸಂಗತಿ; ಪ್ರಸಂಗ.
  3. (ಯುದ್ಧ ಮಾಡುತ್ತಿರುವ ದೇಶಗಳ, ಸೈನ್ಯಗಳ ನಡುವೆ ಸಂಭವಿಸುವ) ಕದನ; ಹೊಡೆದಾಟ; ಸಂಘರ್ಷ: frontier incident ಗಡಿಯ ಘಟನೆ; ಸರಹದ್ದಿನ ಸಂಘರ್ಷ.
  4. (ಎಲ್ಲರಿಗೂ ತೊಂದರೆ ತರುವ, ಹಾನಿ ಉಂಟುಮಾಡುವ) ಸಾರ್ವಜನಿಕ ಘಟನೆ ಯಾ ದುರ್ಘಟನೆ.
  5. (ಎಲ್ಲರ ಗಮನವನ್ನೂ ಸೆಳೆಯುವ) ವಿಶೇಷ – ಘಟನೆ, ಪ್ರಸಂಗ.
  6. (ನಾಟಕದಲ್ಲಿ ಯಾ ಕವಿತೆಯಲ್ಲಿ) ನಿರ್ದಿಷ್ಟ ಘಟನೆ, ಪ್ರಸಂಗ.
  7. (ನ್ಯಾಯಶಾಸ್ತ್ರ) ಅನುಗತ; ಆಸ್ತಿ, ಅಧಿಕಾರ, ಮೊದಲಾದವುಗಳೊಡನೆ ಅನುಗತವಾಗಿ ಬರುವ, ಬಾಧ್ಯತೆ, ಹಕ್ಕು, ಹೊರೆ, ಮೊದಲಾದವು.
See also 1incident
2incident ಇನ್ಸಿಡಂಟ್‍
ಗುಣವಾಚಕ
  1. ಸಂಭಾವ್ಯ; ಸಂಭವಿಸಬಹುದಾದ; ನಡೆಯಬಹುದಾದ; ಘಟಿಸಬಹುದಾದ.
  2. (ಯಾವ ಸಂಗತಿಗೇ ಆಗಲಿ) ಸಹಜವಾದ; ಅನುಬಂಧಿಯಾದ; ಸಂಬಂಧಿಸಿದ: the noise incident on the striking of the tents ಡೇರೆಗಳನ್ನು ಹೊಡೆಯುವುದಕ್ಕೆ ಸಂಬಂಧಿಸಿದ ಗದ್ದಲ.
  3. (ನ್ಯಾಯಶಾಸ್ತ್ರ) (ಆಸ್ತಿ ಮೊದಲಾದವುಗಳಿಗೆ) ಅನುಗತವಾದ; ತಗುಲಿದ.
  4. (ಬೆಳಕು ಮೊದಲಾದವುಗಳ ವಿಷಯದಲ್ಲಿ) (ಮೇಲೆ) ಬೀಳುವ; ಆಪಾತ(ವಾಗುವ).