incidence ಇನ್ಸಿಡನ್ಸ್‍
ನಾಮವಾಚಕ
  1. (ಹೆಗಲ, ತಲೆಯ) ಮೇಲೆ ಬೀಳುವುದು; (ಒಬ್ಬನಿಗೆ) ತಗುಲುವುದು; ಹೊರೆ; ಭಾರ: what is the incidence of the tax? ಆ ಕರಭಾರ, ಆ ತೆರಿಗೆಯ ಹೊರೆ ಎಷ್ಟು ಬೀಳುತ್ತದೆ?
  2. (ರೋಗ, ತೆರಿಗೆ, ಮೊದಲಾದವುಗಳ ವಿಷಯದಲ್ಲಿ) ವ್ಯಾಪ್ತಿ; ಪ್ರಮಾಣ; ತಗಲುವ ಯಾ ಬೀಳುವ ವಿಧಾನ, ಕ್ಷೇತ್ರ, ವ್ಯಾಪ್ತಿ, ಪ್ರಮಾಣ.
  3. ಪ್ರಭಾವದ ಹರವು, ವ್ಯಾಪ್ತಿ, ವಿಸ್ತಾರ.
  4. (ಭೌತವಿಜ್ಞಾನ) ಆಪಾತ; ನೇರಗತಿಯಲ್ಲಿ ಚಲಿಸುವ ಬೆಳಕಿನ ರಶ್ಮಿ ಮೊದಲಾದವು ಒಂದು ತಲದ ಮೇಲೆ ಬಂದು ಬೀಳುವುದು.
ಪದಗುಚ್ಛ

angle of incidence (ಭೌತವಿಜ್ಞಾನ) ಆಪಾತ ಕೋನ; ಬೆಳಕಿನ ಕಿರಣವೊಂದು ಮೇಲ್ಮೈ ಮೇಲೆ ಎರಗಿದಾಗ ಅದಕ್ಕೂ ಆ ಬಿಂದುವಿನಲ್ಲಿನ ಲಂಬ ರೇಖೆಗೂ ಮಧ್ಯೆ ಇರುವ ಕೋನ.