See also 2incense  3incense
1incense ಇನ್‍ಸೆನ್ಸ್‍
ನಾಮವಾಚಕ
  1. ಧೂಪದ್ರವ್ಯ; ಹೊತ್ತಿಸಿ ಉರಿಸುವಾಗ ಪರಿಮಳ ಬೀರುವ, ಗೋಂದು ಜಾತಿಯ ಪರಿಮಳ ದ್ರವ್ಯ, ಸುಗಂಧ ದ್ರವ್ಯ; ಹಾಲುಮಡ್ಡಿ, ಸಾಂಬ್ರಾಣಿ, ಕರ್ಪೂರ, ಮೊದಲಾದವು.
  2. ಧೂಪ; ಪೂಜಾದಿ ಧಾರ್ಮಿಕ ಕ್ರಿಯೆಗಳಲ್ಲಿ, ಹೊತ್ತಿಸಿ ಉರಿಸಿದ ಸುಗಂಧ ದ್ರವ್ಯದ ಹೊಗೆ.
  3. (ರೂಪಕವಾಗಿ) ಸುಳ್ಳು ಹೊಗಳಿಕೆ; ಮುಖಸ್ತುತಿ; ಮಿಥ್ಯಾಪ್ರಶಂಸೆ.
See also 1incense  3incense
2incense ಇನ್‍ಸೆನ್ಸ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗೆ, ವಸ್ತುವಿಗೆ) ಧೂಪ ಹಾಕು.
  2. (ದೇವರಿಗೆ) ಧೂಪ ಸಮರ್ಪಿಸು.
  3. ಪರಿಮಳ ಬೀರು; ಸುಗಂಧ ಹರಡು.
See also 1incense  2incense
3incense ಇನ್‍ಸೆನ್ಸ್‍
ಸಕರ್ಮಕ ಕ್ರಿಯಾಪದ

ಸಿಟ್ಟಿಗೆಬ್ಬಿಸು; ಕೆರಳಿಸು; ರೇಗಿಸು; ಕ್ರೋಧ ಉಂಟುಮಾಡು; ರೋಷ ಬರಿಸು.